Sunday, August 15, 2021

ಸಿದ್ಧಗಂಗಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಧ್ವಜಾರೋಹಣ ಮಾಡಿದ SSLC ಟಾಪರ್ಸ್

ದಾವಣಗೆರೆ, ಆ.15

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ SSಐಅ ಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಲಕಿಯರಾದ ಅನುಷಾ ಗ್ರೇಸ್ ಮತ್ತು ವಿಜೇತಾ ಮುತ್ತಗಿಯವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಧ್ವಜಾರೋಹಣದ ನಂತರ ಮಾತನಾಡಿದ ಈ ಇಬ್ಬರೂ ಬಾಲಕಿಯರು ತಮಗೆ ದೊರೆತ ಈ ಸದಾವಕಾಶದಿಂದ ರೋಮಾಂಚಿತಗೊಂಡಿದ್ದೇವೆ ಎಂದು ಹೇಳುತ್ತಾ ತಮ್ಮ ಸಾಧನೆಗೆ ಪ್ರೇರಣೆ ನೀಡಿದ ಎಲ್ಲ ಶಿಕ್ಷಕರಿಗೆ ಮತ್ತು ಪ್ರೋತ್ಸಾಹ ನೀಡಿದ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು. 

ಈ ಸಂದರ್ಭದಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪಾಲಕರೊಂದಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಸ್ಥೆ ಏರ್ಪಡಿಸಿತ್ತು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸರಾದ ಶಿವಲಿಂಗಪ್ಪನವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಸ್ವಾತಂತ್ರ್ಯ ಪೂರ್ವದ ಭಾರತ, ಸ್ವಾತಂತ್ರ್ಯಾನಂತರದ ಭಾರತದ ಸ್ಥೂಲ ಪರಿಚಯ ಮಾಡಿಕೊಡುತ್ತಾ ಮಕ್ಕಳು ಸಂಸ್ಕಾರವಂತರಾಗಿ ತಮ್ಮ ಭವಿಷ್ಯ ರೂಪಿಸಿಕೊಂಡು ದೇಶವನ್ನು ಮುನ್ನಡೆಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪರಿಣಾಮಕಾರಿಯಾಗಿ ಭಾಷಣ ಮಾಡಿದ ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ರವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ದೇಶಭಕ್ತರ ಉಕ್ತಿಗಳನ್ನು ಉಚ್ಛರಿಸುತ್ತಾ ಸಭಿಕರಲ್ಲಿ ದೇಶಭಕ್ತಿಯ ಸಂಚಲನ ಮೂಡಿಸಿದರು.

ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ರವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ SSಐಅ ಮಕ್ಕಳ ಐತಿಹಾಸಿಕ ದಾಖಲೆಯನ್ನು ಶ್ಲಾಘಿಸುತ್ತಾ ಎಲ್ಲರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.

ದೇಶಭಕ್ತಿ ಗೀತೆಗಳನ್ನು ತೇಜಸ್ವಿನಿ, ನಿರ್ಮಲ ಗುಬ್ಬಿ, ಸಿಂಚನ, ಕಾವ್ಯ ಮತ್ತು ರುದ್ರಾಕ್ಷಿಬಾಯಿ ಹಾಗೂ ಕನ್ನಡ ಉಪನ್ಯಾಸಕ ನಾಗರಾಜ್‍ರವರು ಪ್ರಸ್ತುತಿ ಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉ.ಅ ನಿರಂಜನ್ ರವರು ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಆಡಳಿತ ಮಂಡಳಿ ಮತ್ತು ಕರೋನಾ ಸಮಯದಲ್ಲಿ ಮನೆ ಮನೆಗೆ ಪಾಠಗಳನ್ನು ಮಕ್ಕಳಿಗೆ ನಿರಂತರವಾಗಿ ತಲುಪಿಸುತ್ತಿರುವ ಶಿಕ್ಷಕ ಮತ್ತು ಉಪನ್ಯಾಸಕರನ್ನು ಅಭಿನಂದಿಸುತ್ತಾ ತಾಂತ್ರಿಕ ವರ್ಗವನ್ನು ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್‍ರವರ ಕಾರ್ಯ ವೈಖರಿಯನ್ನು ಮುಕ್ತವಾಗಿ ಶ್ಲಾಘಿಸಿದರು. ಎಲೆಮರೆಯ ಕಾಯಿಯಂತೆ ತಮ್ಮ ಕಾಯಕವನ್ನು ಸದ್ದುಗದ್ದಲವಿಲ್ಲದೆ ನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯದರ್ಶಿ ಹೇಮಂತ್‍ರವರನ್ನು ಅಭಿನಂದಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಸಂಸ್ಥೆಯ ಶಾಲಾ ಕಾಲೇಜಿನ ಬೋಧಕವರ್ಗ ಮತ್ತು ಬೋಧಕೇತರ ಸಿಬ್ಬಂದಿ, ತಾಂತ್ರಿಕ ವರ್ಗ ಮತ್ತು ಕಛೇರಿ ಸಿಬ್ಬಂದಿಯವರು, ಹಲವಾರು ಪಾಲಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಉಪಾನ್ಯಾಸಕರಾದ ಸದಾಶಿವ ಹೊಳ್ಳ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. 


Tuesday, August 10, 2021

SSLC 2021 Result

 ಸಿದ್ಧಗಂಗಾ ಶಾಲೆಗೆ ಅದ್ವಿತೀಯ ಫಲಿತಾಂಶ 625 ಕ್ಕೆ 625 ಗಳಿಸಿದ ಇಬ್ಬರು ಬಾಲಕಿಯರು

ದಾವಣಗೆರೆ ಆಗಸ್ಟ್  9, 2021

2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಸಿದ್ಧಗಂಗಾ ಶಾಲೆಗೆ ಅದ್ವಿತೀಯ ಫಲಿತಾಂಶ ದೊರೆತಿದೆ ಅನುಷಾ ಗ್ರೇಸ್.ಡಿ. ಚಿಂದವಾಳ್ ಮತ್ತು ವಿಜೇತ ಬಸವರಾಜು ಮುತ್ತಗಿ ಈ ಇಬ್ಬರು ಬಾಲಕಿಯರು 625ಕ್ಕೆ 625 ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. 

ವರ್ಷಿತ ಕೆ.ಎಲ್. 621 ಪೂರ್ವಿಕಾ ಎಂ.ಎ. 619, ಸಿದ್ದಾಂತ ಡಿ.ಜೆ. 615, ಪ್ರಣವ್ ಬಾಗೂರ್ 613, ಸಂಜನ 611, ಆಕಾಶ್ ಎಂ.ಎಸ್. 609, ಧೀರಜ್ ಎ.ವಿ. 607, ವಿಕಾಸ್ ಬಿ.ಎಸ್. 607, ಲಿಖಿತ 605, ತೇಜಸ್ ಹೆಚ್.ಎಸ್. 604, ತೇಜಸ್ ಎಸ್.ಎನ್. 604 ಮತ್ತು ನಿದಾ ಸುಲ್ತಾನಾ 600 ಅಂಕಗಳಿಸಿದ್ದಾರೆ. 

ಅತ್ತ್ಯುತ್ತಮ ಶ್ರೇಣಿಯಲ್ಲಿ 90 ಮಕ್ಕಳು, ಪ್ರಥಮ ದರ್ಜೆಯಲ್ಲಿ 209 ಮಕ್ಕಳು, ದ್ವಿತೀಯ ದರ್ಜೆಯಲ್ಲಿ 19 ಮಕ್ಕಳು ಉತ್ತೀರ್ಣರಾಗಿದ್ದಾರೆ.

ಕನ್ನಡದಲ್ಲಿ 8 (125/125), ಇಂಗ್ಲೀಷ್ 18, ಹಿಂದಿ 32, ಗಣಿತ 4, ವಿಜ್ಞಾನ 4, ಸಮಾಜ 3 ಮಕ್ಕಳು ಆಯಾ ವಿಷಯಗಳಲ್ಲಿ 100 ಕ್ಕೆ 100 ಅಂಕಪಡೆದಿದ್ದಾರೆ.

ಆರು ವಿಷಯಗಳನ್ನು 2 ದಿನದ ಪರೀಕ್ಷೆಗಳಲ್ಲಿ ಬರೆಯುವ ಒತ್ತಡವಿದ್ದರೂ ಮಕ್ಕಳು ಮಾನಸಿಕವಾಗಿ ಸಿದ್ಧರಾಗಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ. ಉತ್ತೀರ್ಣರಾದ ಎಲ್ಲಾ ಮಕ್ಕಳನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.



Tuesday, August 3, 2021

CBSE 10 Result - 2021

 ದಾವಣಗೆರೆ, ಆ - 3

2020-21 ನೇ ಸಾಲಿನ ಸಿಬಿಎಸ್‍ಇ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು ಸಿದ್ಧಗಂಗಾ ಶಾಲೆಗೆ 100 ಕ್ಕೆ 100 ಫಲಿತಾಂಶ ಬಂದಿದೆ.
TARUN P
PUNEETH R
ನಿರಂತರ ಮೌಲ್ಯಮಾಪನದನ್ವಯ ಫಲಿತಾಂಶ ನಿರ್ಧರಿಸಲಾಗಿದ್ದು Testಗಳ 10 ಅಂಕಗಳು ಅರ್ಧವಾರ್ಷಿಕ ಪರೀಕ್ಷೆಯ 30 ಅಂಕಗಳು, 3 ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಂದ 40 ಅಂಕಗಳು ಮತ್ತು ಆಂತರೀಕ ಮೌಲ್ಯಮಾಪನದ 20 ಅಂಕಗಳು ಒಟ್ಟು 100 ಅಂಕಗಳ ಸೂತ್ರದಡಿ ಅಂಕಗಳನ್ನು ಕ್ರೋಢೀಕರಿಸಲಾಗಿದೆ. ಶಾಲಾ ಆರಂಭಿಕ ದಿನಗಳಲ್ಲಿ ನಿಧಾನಗತಿಯಲ್ಲಿರುವ ಅಭ್ಯಾಸ ಪ್ರಕ್ರಿಯೆ ಬೋರ್ಡ್ ಪರೀಕ್ಷೆಯು ಸನ್ನಿಹಿತವಾಗುತ್ತಿದ್ದಂತೆ ಶ್ರದ್ಧೆಯಿಂದ ಓದುವುದು ಮಕ್ಕಳ ರೂಢಿ. ಆದರೆ ಈ ಬಾರಿ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಪೂರ್ಣ ಸಿದ್ಧತೆ ನಡೆಸಿದ್ದ ಹಲವಾರು ಮಕ್ಕಳಿಗೆ ಈ ಫಲಿತಾಂಶ ನಿರಾಸೆ ಮೂಡಿಸಿದೆ.

ಸಿದ್ಧಗಂಗಾ ಶಾಲೆಯ ಪುನೀತ್.ಖ ಮತ್ತು ತರುಣ್.P 94.80% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 32 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ಆನ್‍ಲೈನ್ ತರಗತಿ ಪಾಠಗಳನ್ನು ಕೇಳಿ ಉತ್ತಮ ಫಲಿತಾಂಶ ನೀಡಿರುವ ಮಕ್ಕಳನ್ನು ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಉಪಪ್ರಾಂಶುಪಾಲರಾದ ಮಿಶೈಲ್ ಅನ್ವಿತಾ ಡಿ’ಸೌಜರವರು ಮತ್ತು ಬೋಧಕ ಸಿಬ್ಬಂದಿಯವರು ಹಾಗೂ ಆಡಳಿತ ಮಂಡಳಿಯ ಹೇಮಂತ್, ಜಯಂತ್ ಮತ್ತು ಪ್ರಶಾಂತ್‍ರವರು ಅಭಿನಂದಿಸಿದ್ದಾರೆ