ಸಿದ್ಧಗಂಗಾ ಕಾಲೇಜಿಗೆ K-CET ಯಲ್ಲಿ ಉತ್ತಮ ಫಲಿತಾಂಶ
ದಾವಣಗೆರೆ ಆ. 21
ಜುಲೈ ತಿಂಗಳ 30, 31 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ದೊರೆತಿದೆ.
ವಿನಾಯಕ ಹಾವೇರಿ ಬಿ. ಎಸ್ಸಿ., (ಅಗ್ರಿ) 263 ನೇ Rank, ನ್ಯಾಚುರೋಪತಿ ಮತ್ತು ಯೋಗ 346, ವೆಟರ್ನರಿ 446, ಬಿ ಮತ್ತು ಡಿ. ಫಾರ್ಮದಲ್ಲಿ 721 ನೇ Rank ಗಳಿಸಿದ್ದಾನೆ.
ನಿಸರ್ಗ ಎಸ್ ಕೌಟಿ ಬಿ. ಎಸ್ಸಿ(ಅಗ್ರಿ) 267, ಯೋಗ ನ್ಯಾಚುರೋಪತಿ 339, ವೆಟರ್ನರಿ 411, ಬಿ ಮತ್ತು ಡಿ ಫಾರ್ಮ 717ನೇ Rank ಪಡೆದಿದ್ದಾಳೆ.
ವಿರಂಚಿ ಎಲ್. ಎಸ್. ಬಿ. ಎಸ್ಸಿ(ಅಗ್ರಿ) 585 ಇಂಜಿನಿಯರಿಂಗ್ 955 ನೇ Rank ಪಡೆದಿದ್ದಾನೆ.
Nisarga |
Viranchi |
10000ದೊಳಗೆ Rank ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್‍ನಲ್ಲಿ 48, ಬಿ. ಎಸ್ಸಿ(ಅಗ್ರಿ) 66, ನ್ಯಾಚುರೋಪತಿ ಮತ್ತು ಯೋಗದಲ್ಲಿ 58, ವೆಟರ್ನರಿ ಸೈನ್ಸ್‍ನಲ್ಲಿ 45 ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ 38 ಒಟ್ಟು 293 ಇದ್ದಾರೆ.
ಉತ್ತಮ ಫಲಿತಾಂಶ ಪಡೆದಿರುವ ಮಕ್ಕಳನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ.