ಬೋರ್ಡ್ ಪರೀಕ್ಷೆ ಮಾದರಿಯಲ್ಲಿ ನಡೆದ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ
ದಾವಣಗೆರೆ ಫೆ. 25
ದಾವಣಗೆರೆ ಜಿಲ್ಲೆಯ 91 ಎಸ್. ಎಸ್. ಎಲ್. ಸಿ. ಪರೀಕ್ಷಾ ಕೇಂದ್ರಗಳಲ್ಲಿ ಬಾಲಕರು 12407, ಬಾಲಕಿಯರು 12515, ಒಟ್ಟು 24922 ಮಕ್ಕಳು ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಥಮ ಭಾಷೆಯ ಪತ್ರಿಕೆಯನ್ನು ಇಂದು ರಾಜ್ಯ ಮಟ್ಟದ ವಾರ್ಷಿಕ ಪರೀಕ್ಷೆಯ ಮಾದರಿಯಂತೆಯೇ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿ ಬರೆದರು. ದಾವಣಗೆರೆ ದಕ್ಷಿಣ ವಲಯದ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ಬಾಲಕರು 2842, ಬಾಲಕಿಯರು 2847, ಒಟ್ಟು 5689 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು.
ಪರೀಕ್ಷೆಯು ಸುವ್ಯವಸ್ಥಿತವಾಗಿ ನಡೆಯಿತು. ಪರಮೇಶ್ವರಪ್ಪ ಸಿ. ಆರ್. ಉಪನಿರ್ದೇಶಕರು ಸಾ.ಶಿ.ಇ. ದಾವಣಗೆರೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿದ್ದಪ್ಪ ಬಿ. ಸಿ. ದಾವಣಗೆರೆ ದಕ್ಷಿಣ ಇವರು ಸಿದ್ಧಗಂಗಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆ ಸಮಯದಲ್ಲಿ ಮುಖ್ಯ ಅಧೀಕ್ಷಕರಾದ ಅಂಜಿನಪ್ಪ ಹೆಚ್. ಉಪ ಮುಖ್ಯ ಅಧೀಕ್ಷಕರಾದ ವಿಜಯಕುಮಾರ್ ಚಿಂದೆ ಹಾಗೂ ಪ್ರಶ್ನೆ ಪತ್ರಿಕೆ ಅಭಿರಕ್ಷಕರಾದ ಮ. ಗು. ಮುರುಗೇಂದ್ರಯ್ಯ ಇದ್ದರು. ಮಕ್ಕಳು ಅವರವರ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆದ ಕಾರಣ ಪರೀಕ್ಷೆಯ ಹಾಗೂ ಪರೀಕ್ಷಾ ಕೇಂದ್ರದ ಹುಡುಕಾಟದ ಒತ್ತಡ ಬಗೆಹರಿಸುವಲ್ಲಿ ಈ ಪೂರ್ವ ಸಿದ್ಧತಾ ಪರೀಕ್ಷೆ ಸಹಕಾರಿಯಾಯಿತು. ಮಾರ್ಚ್ 21 ರಿಂದ ಪ್ರಾರಂಭವಾಗಲಿರುವ ವಾರ್ಷಿಕ ಪರೀಕ್ಷಾ ಕೇಂದ್ರಗಳ ಪರಿಚಯ ಮಕ್ಕಳಿಗಾಗಿರುವುದರಿಂದ ಪಾಲಕರೂ ಸಂತಸ ವ್ಯಕ್ತಪಡಿಸಿದರು. ವಿನೂತನ ಪ್ರಯೋಗ ಯಶಸ್ವಿಯಾಗಿದೆ ಎಂದು ಉಪನಿರ್ದೇಶಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.