ರಾಷ್ಟ್ರ ಮಟ್ಟದ ಓಪನ್ ಕರಾಟೆ – 2018
ಸಿದ್ಧಗಂಗೆಯ ಸುಕೃತ. ಒ. ಗೆ ಪ್ರಥಮ ಸ್ಥಾನ
ದಾವಣಗೆರೆ ಆ.13,
ಒಂಭತ್ತು ವರ್ಷದ ಬಾಲೆ ಸುಕೃತ. ಒ ಅಖಿಲ ಭಾರತ ಹಾಕುಅಕಾೈ ಓಪನ್ ಕರಾಟೆ ಚಾಂಪಿಯನ್ ಶಿಪ್-2018ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಟಾ ಮತ್ತು ಕುಮಿಟೆನಲ್ಲಿ ಪ್ರಥಮ ಸ್ಥಾನ ಗಳಿಸಿ ಆಕರ್ಷಕ ಫಲಕ, ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ಪಡೆದಿದ್ದಾಳೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 11 ಮತ್ತು 12ರಂದು ನಡೆದ ಈ ಸ್ಪರ್ಧೆಗಳಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ 4ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಬಾಲಕಿ ಸುಕೃತ. ಎಂ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀ ನೀಲಕಂಠ ಇವರ ಸುಪುತ್ರಿಯಾಗಿದ್ದಾಳೆ. ಕರಾಟೆ ಕೇಸರಿ ಮಾರ್ಷಲ್ ಆಟ್ರ್ಸ್ ಶಾಲೆಯ ಕುಬೇರ ನಾಯ್ಕ ಮತ್ತು ಸಾದಿಖ್ ಇವರು ಬಾಲಕಿಗೆ ತರಬೇತಿ ನೀಡಿದ್ದಾರೆ. ಕಿರಿಯ ವಯಸ್ಸಿನ ಸುಕೃತಳ ಹಿರಿಯ ಸಾಧನೆಗೆ ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿಯವರು ಮತ್ತು ಮಾರ್ಗದರ್ಶನ ನೀಡಿದ ಕರಾಟೆ ಗುರುಗಳು ಅಭಿನಂದನೆ ಸಲ್ಲಿಸಿದ್ದಾರೆ.