Saturday, May 13, 2017
District Topper - Basavaraj P.H.
ದ್ವಿತೀಯ ಪಿ ಯು ಸಿ ಜಿಲ್ಲೆಯ Tooper ಬಸವರಾಜನಿಗೆ ಸಿದ್ಧಗಂಗಾ ಸಂಸ್ಥೆಯಿಂದ ಹೃದಯಸ್ಪರ್ಶಿ ಸನ್ಮಾನ
ದಾವಣಗೆರೆ , ಮೇ 12ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 589 ಅಂಕ ಪಡೆದು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ P.H. ಬಸವರಾಜನಿಗೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ವತಿಯಿಂದ ಆತ್ಮೀಯ ಸನ್ಮಾನ ಏರ್ಪಡಿಸಲಾಗಿತ್ತು. ಸೌಮ್ಯ ಸರಳ ಸ್ವಭಾವದ ಬಸವರಾಜುವಿನ ಸಾಧನೆಯನ್ನು ಶ್ಲಾಘಿಸಿದ ಸಂಸ್ಥೆಯ ನಿರ್ದೇಶಕರಾದ ಡಾ।। ಜಯಂತ್ ಮತ್ತು ಪ್ರಾಂಶುಪಾಲರಾದ ಪ್ರಸಾದ್ ಬಂಗೇರರವರು ಬಡತನ, ಕೊರತೆಗಳು, ಕಷ್ಟಗಳು ಸಾಧನೆಗೆ ಅಡ್ಡಿಯಾಗಲಾರದು ಎಂಬುದಕ್ಕೆ ಬಸವರಾಜ ಜ್ವಲಂತ ನಿದರ್ಶನವೆಂದರು. PCM ಮೂರರಲ್ಲೂ ನೂರಕ್ಕೆ ನೂರು ಅಂಕಗಳನ್ನು ಪಡೆಯಲು ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಮಾರ್ಗದರ್ಶನ ನೀಡಿದ ಕಾಲೇಜಿನ ಉಪನ್ಯಾಸಕ ವರ್ಗದವರನ್ನು ಅಭಿನಂದಿಸಿದರು. ಕಾಲೇಜಿನ ಉಪನ್ಯಾಸಕರು ಹಾಜರಿದ್ದು ಬಾಲಕನಿಗೆ ಅಭಿನಂದಿಸಿದರು. ಕಾಲೇಜು ಪ್ರಾರಂಭವಾದ 7 ವರ್ಷಗಳ ಫಲಿತಾಂಶದಲ್ಲಿ ಇದು ಅತ್ಯುತ್ತಮ ಫಲಿತಾಂಶ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಂಸ್ಥೆಯ ಕನಸನ್ನು ಬಸವರಾಜ ನನಸು ಮಾಡಿದ್ದನೆಂದು ಸಂಸ್ಥೆಯ ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜ ಶ್ಲ್ಯಾಘಿಸಿದರು. ಸಮಾರಂಭದಲ್ಲಿ ಸಂಸ್ಥಾಪಕರಾದ M.S. ಶಿವಣ್ಣ ಮತ್ತು ಅಧ್ಯಕ್ಷರಾದ ಹೇಮಂತ್ ರವರು ಹಾಜರಿದ್ದರು.
Friday, May 12, 2017
Tuesday, May 2, 2017
Subscribe to:
Posts (Atom)